ತರಕಾರಿಗಳು

 

ನೀರುಳ್ಳಿ

ಉಳ್ಳಾಗಡ್ಡಿ (ಈರುಳ್ಳಿ)ಯು ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರು ಪದಾರ್ಥದಂತೆಯೂ ಬೆಳೆಯ ಎಲ್ಲಾ ಹಂತಗಳಲ್ಲಿ ಉಪಯೋಗಿಸಲಾಗುವುದು ಉತ್ತರ ಕರ್ನಾಟಕದಲ್ಲಿ ಈರುಳ್ಳಿಯನ್ನು ಮುಖ್ಯ ಬೆಳೆಯಾಗಿಯೂ ಹಾಗೂ ಇತರ ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ಇದು ಘಾಟು ವಾಸನೆಗೆ ಪ್ರಸಿದ್ಧಿ.

 

ಬೆಂಡೆಕಾಯಿ

    ನಮ್ಮೆ ರಾಜ್ಯದಲ್ಲಿ ಬೆಳೆಯುವ ತರಕಾರಿ ಬೆಳೆಗಳಲ್ಲಿ ಬೆಂಡಯೂ ಒಂದು ಮುಖ್ಯ ಬೆಳೆಯಾಗಿದೆ. ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ.

 

ಒಣಮೆಣಸಿನ ಕಾಯಿ

ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರು ಪದಾರ್ಥದ ಬೆಳೆ, ಇದನ್ನು ಖುಷ್ಕಿ ಹಾಗೂ ನೀರಾವರಿಯಲ್ಲಿ ಬೆಳೆಯಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಇದನ್ನು ಇತರ ಬೆಳೆಗಳ ಜೊತೆಗೆ ಮಿಶ್ರಬೆಳೆಯಾಗಿ ಅಥವಾ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ.

 

ನೆಲಗುಳ್ಳ

ಈ ಬೆಳೆಯನ್ನು ವರ್ಷದಾದ್ಯಂತ ಬೆಳೆಯಬಹುದು. ಇದರಲ್ಲಿ ಹೆಚ್ಚಾಗಿ ‘ಎ’ ಮತ್ತು ‘ಬಿ’ ಜೀವಸತ್ವಗಳಿದ್ದು ಈ ತರಕಾರಿಯು ಮಧುಮೇಹ ರೋಗಗಳಿಗೆ ಒಳ್ಳೆಯದಾಗಿದೆ.

ಟೊಮ್ಯಾಟೊ

   ಟೊಮಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಈ ತರಕಾರಿಯು ಎ, ಬಿ ಹಾಗು ಸಿ ಜೀವಸತ್ವಗಳನ್ನು ಒದಗಿಸುತ್ತದೆ.

ಬೇಳೆಕಾಳುಗಳು

ಇಂಡಿಕಸ್

ತೊಗರಿ, ಉತ್ತರ ಕರ್ನಾಟಕದ ಬಹು ಮುಖ್ಯವಾದ ದ್ವಿದಳ ಧಾನ್ಯದ ಬೆಳೆಯಾಗಿದೆ. ಇದನ್ನು ರಾಜ್ಯದಲ್ಲಿ 6 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 2.8 ಲಕ್ಷ ಟನ್ ಉತ್ಪಾದನೆ ಪಡೆಯುಲಾಗುತ್ತಿದೆ. ಇದನ್ನು ಕಲಬುರ್ಗಿ ಜಿಲ್ಲೆಯಲ್ಲಿ ಇಡೀ ಬೆಳೆಯಾಗಿ ಮತ್ತು ಇತರ ಪ್ರದೇಶಗಳಲ್ಲಿ ಹೆಸರು, ಉದ್ದು, ಎಳ್ಳು, ಜೋಳ ಮತ್ತು ಸಜ್ಜೆ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತಿದೆ.

ಉದ್ದು

ಉದ್ದು ಉತ್ತರ ಕರ್ನಾಟಕದ ಮುಖ್ಯವಾದ ದ್ವಿದಳಧಾನ್ಯದ ಬೆಳೆಯಾಗಿದ್ದು ಇದನ್ನು ಬೀದರ್, ಕಲಬುರ್ಗಿ, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಯನ್ನು ರಾಜ್ಯದಲ್ಲಿ 1.27 ಲಕ್ಷ ಹೆಕ್ಟೇರಗಳಲ್ಲಿ ಬೆಳೆಯುತ್ತಿದ್ದು 0.44 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ.

ಮನೆ ಹುರುಳಿ

ಹೆಸರು ಕಡಿಮೆ ಅವಧಿಯ ದ್ವಿದಳ ಧಾನ್ಯದ ಬೆಳೆಯಾಗಿದೆ. ಸುಮಾರು 70 ದಿನಗಳಲ್ಲಿ ಕೊಯ್ಲಿಗೆ ಬರುವ್ರದರಿಂದ ಎರಡು ಬೆಳೆ ತೆಗೆಯುವ ಸಂದರ್ಭದಲ್ಲಿ ಹೆಚ್ಚು ಪ್ರಯೋಜನಕಾರಿ. ಇದನ್ನು ಮುಂಗಾರು ಹಾಗೂ ಬೇಸಿಗೆಯಲ್ಲಿ ಬೆಳೆಯಲಾಗುತ್ತಿದೆ. ಭತ್ತದ ಕುಳೆ ಗದ್ದೆಯಲ್ಲಿಯೂ ಇದನ್ನು ಬೆಳೆಯಬಹುದು. ರಾಜ್ಯದಲ್ಲಿ ಈ ಬೆಳೆಯನ್ನು ಅಂದಾಜು 4.0 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು 0.9 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ಈ ಬೆಳೆಯು ಉತ್ತರ ಕರ್ನಾಟಕದಲ್ಲಿ ಸುಮಾರು 2,50,00 ಹೆಕ್ಟೇರ್‌ ಕ್ಷೇತ್ರ ಆವರಿಸಿದೆ.

ಹಣ್ಣು

ಸಾಮಾನ್ಯ

    ಮಾವ್ರ ನಮ್ಮ ರಾಜ್ಯದ ಪ್ರಮುಖ ಹಣ್ಣಿನ ಬೆಳೆ ಮತ್ತು ಬಹಳ ಪ್ರಾಮುಖ್ಯತೆ ಪಡೆದಿದೆ. ಇದರ ಹಣ್ಣುಗಳು ರುಚಿಕರವಾಗಿದ್ದು "ಎ' ಮತ್ತು "ಸಿ' ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಮಾವಿನ ಹಣ್ಣುಗಳನ್ನು ತಾಜಾ ರೂಪದಲ್ಲಿ ಮತ್ತು ಸಂಸ್ಕರಿಸಿದ ಪಾನೀಯ ರೂಪದಲ್ಲಿ ಉಪಯೋಗಿಸುತ್ತಾರೆ. ವಿದೇಶಗಳಲ್ಲಿ ಮಾವಿಗೆ ಹೆಚ್ಚಿನ ಬೇಡಿಕೆಯಿರುವ್ರದರಿಂದ ರಫ್ತು ಮಾಡಲಾಗುತ್ತಿದೆ.

ದಾಳಿಂಬೆ

ದಾಳಿಂಬೆ ಹಣ್ಣಿಗೆ ತಂಪಾದ, ಪುನ:ಶ್ಚೇತನಗೊಳಿಸುವ ಶಕ್ತಿ ಇದೆ. ಇದನ್ನು ಹೆಚ್ಚಾಗಿ ಕೈತೋಟದಲ್ಲಿ ಬೆಳೆಸಲಾಗುತ್ತಿದ್ದರೂ, ಚೆನ್ನಾಗಿ ಬೆಳೆಸಿದಲ್ಲಿ ಅತ್ಯುತ್ತಮ ಆದಾಯ ಪಡೆಯಬಹುದು. ಹೆಚ್ಚು ಮಳೆ ಬೀಳುವ ಪ್ರದೇಶಗಳು ಈ ಬೆಳೆಗೆ ಯೋಗ್ಯವಲ್ಲ.

ಹೂವು

ಸೂರ್ಯಕಾಂತಿ ಹೂವು

   ಸೂರ್ಯಕಾಂತಿ ಒಂದು ಮುಖ್ಯವಾದ ಎಣ್ಣೆಕಾಳಿನ ಬೆಳೆ. ಇದನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ರಾಜ್ಯದಲ್ಲಿ 12.3 ಲಕ್ಷ ಹೆ. ಕ್ಷೇತ್ರದಲ್ಲಿ ಈ ಬೆಳೆಯು ಆವರಿಸಿದ್ದು, ಅಂದಾಜು 5.2 ಲಕ್ಷ ಟನ್‌ ಉತ್ಪಾದನೆ ಇರುವ್ರದು (2007).

ಮಲ್ಲಿಗೆ

ಮಲ್ಲಿಗೆ ಆಕರ್ಷಕ ಹಾಗೂ ಪ್ರಮುಖ ವಾಣಿಜ್ಯ ಬಿಡಿ ಹೂ ಬೆಳೆಯಾಗಿದ್ದು, ಇದನ್ನು ಸುಗಂಧ ದ್ರವ್ಯ ತಯಾರಿಕೆಗೆ ಕೂಡಾ ಉಪಯೋಗಿಸುತ್ತಾರೆ. ಬಿಡಿ ಹೂಗಳನ್ನು ಸಾಮಾನ್ಯವಾಗಿ ಹಾರ ಮತ್ತು ಮಾಲೆಗಳನ್ನು ತಯಾರಿಸಲು ಬಳಸುತ್ತಾರೆ. ಸುಗಂಧ ದ್ರವ್ಯಕ್ಕೆ ಹೆಚ್ಚಿನ ರಫ್ತು ಮಾಡುವ ಅವಕಾಶವಿರುವ ಜೊತೆಗೆ ಔಷಧಿಯ ಮಹತ್ವವ್ರ ಇದೆ.

ಇತರೆ ಬೆಳೆ

ಹತ್ತಿ

ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದ ವೈವಿದ್ಯಮಯ ಕೃಷಿ ವಲಯಗಳಲ್ಲಿನ ಹವಾಗುಣ, ನೀರಾವರಿ ಹಾಗೂ ಮಳೆಯ ಪ್ರಮಾಣಕ್ಕನುಗುಣವಾಗಿ ತಳಿ ಸುಧಾರಣೆ, ಹೊಸ ಬೇಸಾಯ ಪದ್ಧತಿ, ಕೀಟ ಹಾಗೂ ರೋಗಗಳ ನಿಯಂತ್ರಣ ಈ ವಿಷಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಯ ಫಲವಾಗಿ ಹತ್ತಿಯನ್ನು ಲಾಭದಾಯಕ ಬೆಳೆಯನ್ನಾಗಿ ಬೆಳೆಯಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈ ಬೆಳೆಯನ್ನು 5.49 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು ಅದರಲ್ಲಿ ಶೇ. 80 ರಷ್ಟು ಬಿಟಿ ಹತ್ತಿ ಒಳಗೊಂಡಿದೆ. ಒಟ್ಟಾರೆ ಹತ್ತಿ ಉತ್ಪಾದನೆಯು 12 ಲಕ್ಷ ಬೇಲ್‍ಗಳಾಗಿದ್ದು ಉತ್ಪಾದಕತೆಯು ಪ್ರತಿ ಹೆಕ್ಟೇರಿಗೆ 405 ಕಿ.ಗ್ರಾಂ ಅರಳೆ ಇರುವುದು.

ಪೀನಟ್ಸ್

ಶೇಂಗಾ, ಕರ್ನಾಟಕದ ಉತ್ತರ ಜಿಲ್ಲೆಗಳ ವಿವಿಧ ಮಣ್ಣು ಮತ್ತು ಹವಾಮಾನಗಳಲ್ಲಿ ಬೆಳೆಯುವ ಪ್ರಧಾನ ಎಣ್ಣೆಕಾಳು ಬೆಳೆ. ಇದರ ಇಳುವರಿ ಮುಖ್ಯವಾಗಿ, ಬೆಳೆಯ ಅವಧಿ, ಮಳೆಯ ಪ್ರಮಾಣ, ರೋಗ, ಕೀಟ ಮತ್ತು ಕಳೆ ನಿಯಂತ್ರಣದ ಮೇಲೆ ಅವಲಂಬಿತವಾಗಿದೆ. ರೋಗ ಮತ್ತು ಕೀಟ ನಿರೋಧಕ ಸಾಮರ್ಥ್ಯವ್ರಳ್ಳ ತಳಿಗಳ ಆಯ್ಕೆ, ಇಳುವರಿ ಮೇಲೆ ಪ್ರಭಾವ ಬೀರುತ್ತದೆ.